“Manmath man” ಮನ್ಮಥ ಮನ

“Manmath man” ಮನ್ಮಥ ಮನ

ಗುರುಗಳೆ ಶುಭೋದಯ🙏
ಯಾವಾಗ ಧ್ಯಾನಕ್ಕೆ ಕುಳಿತುಕೊಂಡರು ಮೊದಲು ಅರ್ಧ ಗಂಟೆ ಈ ಆಲೋಚನೆಯ ಸುಂದರಿಯ ಹಿಂದೆ ಓಡಿ ಹೋಗುವ ಈ ಮನ್ಮಥ ಮನಸ್ಸನ್ನು ಹುಡುಕಿ ಯಥಾಸ್ಥಿತಿಗೆ ತರುವುದೇ ಒಂದು ಅರ್ಧ ತಾಸಿನ ಕೆಲಸವಾಗುತ್ತಿತ್ತು.ಕೆಲವೊಮ್ಮೆ ಇವರಿಬ್ಬರ ಪ್ರೀತಿಯಲ್ಲಿ ನಾನು ಕೂಡ ಮುಳುಗಿ ಹೋಗಿತ್ತಿದ್ದುದು ಸುಳ್ಳಲ್ಲಾ.ಆದರೂ ಕತ್ತಿ ಮೊಂಡಾಗಿದ್ದರೂ ಯುದ್ಧದ ಉತ್ಸಾಹ ಹರಿತವಾಗಿರುವುದರಿಂದ ಒದ್ದಾಡಿ ಉರುಳಾಡಿ ಅವರನ್ನು ಯಥಾಸ್ಥಿತಿಗೆ ತಂದು ನಿಲ್ಲಿಸುವ ಪ್ರಯತ್ನ ನಡೆಯುತ್ತಿದ್ದುದು ಸುಳ್ಳಲ್ಲಾ.ಆದರೆ ಇವತ್ಯಾಕ್ಕೋ ಇದು ಅತಿರೇಖವೆನ್ನಿಸಿ ಯಾವುದೇ ಕಾರಣಕ್ಕೂ ಇವರಿಬ್ಬರು ನನ್ನ ಕಣ್ಣು ತಪ್ಪಿಸಿ ಓಡಿ ಹೋಗಬಾರದೆಂದು ಸುರುವಿನಿಂದಲೇ ಅತ್ಯಂತ ಎಚ್ಚರವಾಗಿ ಕ್ಷಣ ಕ್ಷಣಕ್ಕೂ ಗಮನಿಸುತ್ತಿದ್ದೆ.ಎಲ್ಲವೂ ಸಸೂತ್ರವಾಗಿತ್ತು ಒಂದೈದು ನಿಮಿಷ…..ಅರೇ ಆದರೆ ಎಲ್ಲವೂ ಸರಿಯಾಗಿದೇ ಎಂದೆನಿಸುವ ಕ್ಷಣ ಮಾತ್ರದೊಳಗೆ ಇವರಿಬ್ಬರು ಆಗಲೇ ಒಳನುಗ್ಗಿಯಾಗಿತ್ತು ನನಗರಿವಿಲ್ಲದೇ …ಅರೆರೆ ಏನಾಶ್ಚರ್ಯ ಅವನ ಬರುವಿಕೆಯೇ ಚಂದವೇನು,ಅವನ ಬರುವಿಕೆಗೂ ಅವಳ ಕಾಯುವಿಕೆಗೂ ಎಂತಹ ಸಾಮ್ಯತೆ ಅವರಿಬ್ಬರ ಪ್ರೀತಿ ನನ್ನ ಕರ್ತವ್ಯವನ್ನೇ ಮರೆಸಿಬಿಡುವಷ್ಟು ಪ್ರಖರ.ಆದರೆ ಎವತ್ತು ಎಚ್ಚರವಾಗಿಯೇ ಇದ್ದುದರಿಂದ ನಾನು ಕೂಡ ದ್ರಷ್ಟಿಯಿಟ್ಟು ನೋಡುತ್ತಿದ್ದೆ ಹದ್ದಿನಂತೆ.ಏನಾಶ್ಚರ್ಯ ಗುರುಗಳೆ…!!!!
ಆ ಆಲೋಚನೆ ಬಂದು ಮನಸ್ಸನ್ನು ಹೊತ್ತೊಯ್ಯುವ ಪ್ರತಿ ಕ್ಷಣವೂ ಬೆಣ್ಣೆಯಲ್ಲಿ ಕೂದಲೆಳೆದಂತಿತ್ತು.ನಾನಂತೂ ಇದನ್ನು ಸಾಕ್ಷಿಭಾವದಿಂದ ಕುಳಿತು ನೋಡುತ್ತಾ ಇದ್ದೆ ಮೂಕವಿಸ್ಮಿತನಾಗಿ ,ಇಷ್ಟು ದಿನ ಬೇಕಾಯಿತಲ್ಲಾ ಇವರಿಬ್ಬರ ಪ್ರೀತಿಯನ್ನು ಕಣ್ಣಾರೆ ನೋಡಲು.ಒಂದೇ ಏಟಿಗೆ ನನ್ನ ಅಹಂಕಾರವೆಲ್ಲಾ ಮಣ್ಣಾಯಿತು ಎಂತಹ ವಿಚಿತ್ರ ಸೋಜಿಗವನ್ನು ನಮ್ಮೊಳಗಿಟ್ಟು ಕೊಂಡು ನಮಗರಿವಿಲ್ಲದೆ ಬದುಕುತ್ತಿದ್ದೇವೆ ನಾವು.ಯಪ್ಪಾ ಆ ಆಲೋಚನೆ ಬರುವುದು ಒಂದು ಆಮೇಲೆ ಎರಡಾಗಿ ಎರಡು ಮೂರಾಗಿ ಮೂರೂ ನೂರಾಗುವುದನ್ನ ಸಾಕ್ಷಿ ಭಾವದಿಂದ ನೋಡುವುದೆ ಒಂದು ವಿಚಿತ್ರ ಅನ್ನಿಸುತು ಗುರುಗಳೆ.
ಇವಿಷ್ಟು ನಡೆಯುವಾಗ ದೇಹದಲ್ಲೊಂದು ಬದಲಾವಣೆ ಅನುಭವಕ್ಕೆ ಬರುತ್ತಿತ್ತು.ಯಾವುದೋ ಒಂದು ಬಲವಾದ ಅಯಸ್ಕಾಂತೀಯ ಶಕ್ತಿ ನನ್ನನ್ನು ನೆಲಕ್ಕೆ ಎಳೆದು ಹಿಡಿದುಕೊಂಡಿತ್ತು,ನಾನು ಕುಳಿತ ಸ್ಥಿತಿ ಹೇಗಿತ್ತೆಂದೆರೆ ನಿಜವಾದ ಒಂದು ಆಸನದಲ್ಲಿ ಕುಳಿತ ಅನುಭವ.ಬೆನ್ನು ಮೂಳೆ ನೇರವಾಗಿತ್ತು ದೇಹ ಕೆಳಗಡೆಗೆ ಎಳೆಯುತ್ತಿತ್ತು. ( ಅದನ್ನು ಕಲ್ಪಿಸಲು ಆಗುತ್ತಿಲ್ಲಾ ಗುರುಗಳೆ)
ಕೊನೆಗೆ ತುಂಬಾ ಬಲಿತು ಹಣ್ಣಾದ ಬಾಳೆಹಣ್ಣಿನ ಒಂದು ಮಾಲೆ ಗೋಚರವಾಯಿತು.ಅಲ್ಲಿಗೆ ನನ್ನ ಬುದ್ಧಿ ಮತ್ತೆ ಎಚ್ಚರವಾಯಿತು.

To know more – click here