ಜೀವನದಲ್ಲಿ ಒಬ್ಬ ಮನುಷ್ಯ ಏನನ್ನು ಬೇಕಾದರೂ ಅಥವ ಯಾವುದನ್ನೂ ಬೇಕಾದರೂ ಆತ ತನ್ನ ಜಾಣ್ಮೆ ಯಿಂದ ಹಾಗೂ ಕೆಲವೊಂದನ್ನು ದುಡ್ದಿನಿಂದ ಕೊಂಡುಕೊಳ್ಳಬಹುದು .
ಆದರೆ ಆತ ತನ್ನ ಜೀವಿತಾವಧಿ ಯಲ್ಲಿ ಕೊಂಡುಕೊಳ್ಳಲಾಗದೇ ಇರುವುದೆಂದರೆ ಒಬ್ಬ ನಿಜವಾದ ಗುರುವನ್ನು.( ಗುರುಗಳು ಬಹಳಷ್ಟಿರುತ್ತಾರೆ ರಸ್ತೆ ರಸ್ತೆಗೆ ಗಲ್ಲಿ ಗಲ್ಲಿಗೆ ಸಿಗುತ್ತಾರೆ ಆದರೆ ನಿಜವಾದ ಆಧ್ಯಾತ್ಮ ಸಾಧಕ ಸಿಗುವುದು ಬಹಳ ವಿರಳ )ಇಡೀ ದೇಶದಾದ್ಯಂತ ಹಲವಾರು ಮಂದಿ ನಿಜವಾದ ಆಧ್ಯಾತ್ಮ ಸಾಧಕರಿದ್ದರೂ ಕೂಡ ಸುಮಾರು ಐವತ್ತರಷ್ಟು ಜನ ಪ್ರಪಂಚದ ಬೆಳಕಿಗೆ ಬರದೆ ಅವರು ತಮ್ಮದೇ ಆದ ಜೀವನ ನಡೆಸುತ್ತಿರುತ್ತಾರೆ.ಇದ್ದ ಐವತ್ತು ಜನರಲ್ಲಿ ಮೂವತ್ತೈದು ಜನ ನಿಜವಾದ ಸಾಧಕರಾಗಿದ್ದರೂ ಕೂಡ ಮಾಯೆ ಎಂದೇ ಹೆಸರಾದ ಹಣ,ಹೆಂಗಸಿನ ಮೋಹಕ್ಕೆ ಬಲಿಯಾಗಿ ತಮ್ಮ ಆಧ್ಯಾತ್ಮ ಸಾಧನೆ ಮರೆತು ತಮ್ಮದೇ ಮಾಯೆಯಲ್ಲಿ ಬಿದ್ದು ಒದ್ದಾಡುತ್ತಿರುವುದು ದುರಂತ.ಉಳಿದ ಇಪ್ಪತ್ತ್ತೈದು ಜನರು ಅತಿ ವಿರಳವಾಗಿ ಅವರು ಪ್ರಚಾರ ಬಯಸದೇ ಅವರಷ್ಟಕ್ಕೆ ಅವರು ತಮ್ಮ ಸಾದನೆ ಮಾಡಿಕೊಂಡು ಇರುವ ಶಿಷ್ಯರಿಗೆ ಆಧ್ಯಾತ್ಮ ಭೋಧನೆ ಮಾಡುತ್ತಿರುತ್ತಾರೆ.ಅಂತಹ ಗುರುಗಳ ಸಾಲಿಗೆ ನಮ್ಮ ಗುರುಗಳು ನಿಲ್ಲುತ್ತಾರೆ.ನಾನು ಕೂಡ ಒಬ್ಬ ಗುರುವನ್ನು ಹುಡುಕುತ್ತಿದ್ದವನಾದರೂ ಕೂಡ ಗುರು ಹೇಗಿರಬೇಕು ಎನ್ನುವ ಕಲ್ಪನೆಯೇನು ಇರಲಿಲ್ಲಾ.ಆದರೆ ಯಾವುದೋ ಪೂರ್ವ ಜನ್ಮದ ಪುಣ್ಯವೇನೋ ಎಂಬಂತೆ ಇವರು ಕಾರಾಣಾಂತರಗಳಿಂದ ನನಗೆ ಪರಿಚಯವಾಗಿ ಸುಮಾರು ಎರಡು ವರ್ಷಗಳಿಂದ ಇವರ ನೆರಳಿನಲ್ಲಿ ಬದುಕುತ್ತಿರುವ ಕೆಲವೊಂದು ಸಾಧಕರ ಜೊತೆ ನಾನು ಕೂಡ ಪಾಲುದಾರನಾಗಿದ್ದು ನನ್ನ ಮತ್ತೊಂದು ಪುಣ್ಯ.ಆಧ್ಯಾತ್ಮ ವೆಂದರೆ ಕೇವಲ ನಮ್ಮ ದಿನ ನಿತ್ಯದ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ,ಮಾನಸಿಕ ನೆಮ್ಮದಿಗಾಗಿ,ಆರೋಗ್ಯ ಕ್ಕಾಗಿ ಹೀಗೆ ಕೆಲವೊಂದು ಆಲೋಚನೆ ಹೇಗೆ ಎಲ್ಲರ ಮನಸ್ಸಿನಲ್ಲಿರುತ್ತದೇಯೋ ಹಾಗೆಯೇ ನಾನು ಕೂಡ ಅವರ ಪಟ್ಟಿಯಲ್ಲಿದ್ದವನೇ.
ಆದರೆ ರಿಷಿಟ್ರೈಬ್ ಪರಿಚಯವಾಗಿ ಪ್ರಾಣವಿದ್ಯಾ ಕಲಿತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡ ಮೇಲೆ ದಿನನಿತ್ಯದ ಬದುಕು ಅಗಾಧವಾಗಿ ಬದಲಾಗತೊಡಗಿತು.ನಾನು ಈವೆಂಟ್ ಮ್ಯಾನೆಜ್ಮೆಂಟ್ ವ್ಯವಹಾರ ಮಾಡುತ್ತಿದ್ದರಿಂದ ತುಂಬಾ ಒತ್ತಡದ ಜೀವನ ನಡೆಸುತ್ತಿದ್ದ ನನಗೆ ಎಲ್ಲವೂ ಸಸೂತ್ರವಾಗಿ ನಡೆಯಲಾರಂಬಿಸಿತು.ಪ್ರಾಣವಿದ್ಯಾ ಮೂಲಸೂತ್ರದಂತೆ ನನ್ನ ಪರಿಸ್ಥಿತಿ ,ಪರಿಸರ ,ಆರೋಗ್ಯ ನನ್ನ ಹಿಡಿತಕ್ಕೆ ಸಿಕ್ಕಿತು.ಎಲ್ಲಿ ಅದು ಮೂರು ನನ್ನ ಕೈ ವಶವಾಯಿತೋ ನಿರಾಯಾಸವಾಗಿ ನನ್ನ ಜೀವನ ಸಾಗುತ್ತಿತ್ತು.ಪ್ರಾಣವಿದ್ಯಾಗೆ ಬರುವಾಗ ನಾನೊಬ್ಬ ಸಣ್ಣ ಸ್ಟಾರ್ಟ್ ಅಪ್ ಮಾಡಿಕೊಂಡಿದ್ದವನು ಕೇವಲ ಎರಡು ವರ್ಷದಲ್ಲಿ ಮೂರೂ ಸ್ವಂತ ಗಾಡಿ ಕೊಂಡುಕೊಳ್ಳುವಷ್ಟು ಬೆಳೆಯಿತು.ಇದೆಲ್ಲಾ ಹೇಗೆ ಸಾಧ್ಯ ಎಂದು ಅಂದುಕೊಳ್ಳುವುದಕ್ಕೂ ಸಮಯವಿಲ್ಲದಷ್ಟು ಬ್ಯುಸಿಯಾಗಿಬಿಟ್ಟೆ.ಆದರೆ ಅಲ್ಲೇ ನೋಡಿ ಮನುಷ್ಯ ತಪ್ಪು ಮಾಡುವುದು ಯಾವಾಗ ಆನಂದ,ನೆಮ್ಮದಿ ,ಸಂತೋಷ ವಿರುತ್ತದೋ ಆಗ ಯಾವುದೂ ನೆನಪಿರುವುದಿಲ್ಲಾ ನಾನು ನನ್ನ ಎಲ್ಲಾ ಸಾಧನೆ ಬಿಟ್ಟು ಮತ್ತೆ ದುಡ್ದಿನ ಹಿಂದೆ ಬಿದ್ದಿದ್ದೆ.ಮತ್ತೆ ನನ್ನ ಪರಿಸ್ಥಿತಿ ಪರಿಸರ ಕೈ ಬಿಟ್ಟಾಗಲೇ ಮತ್ತೆ ಪ್ರಾಣ ವಿದ್ಯಾ ಪ್ರಾರಂಭಿಸಿ ಇವತ್ತಿನವರೆಗೂ ಮಾಡುತ್ತಿದ್ದೇನೆ.ಇದೇ ರಿಷಿಟ್ರೈಬ್ ಅಲ್ಲೇ ರೇಖಿ,ಚಕ್ರಧ್ಯಾನ,ಮನಸ್ಸಯ್ಯಾನ ಕಲಿತು ನೆಮ್ಮದಿಯಾಗಿ ಬದುಕುತ್ತಿದ್ದೇನೆ.ಆದರೆ ನನ್ನ ಪ್ರಕಾರ ಇಂತಹ ಗುರುಗಳು ಸಿಗಬೇಕಾದರೆ ಯೋಗವಿರಬೇಕು ಮತ್ತು ಯೋಗ್ಯತೆ ಇರಬೇಕು.
ಆಧ್ಯಾತ್ಮದ ಬಗ್ಗೆ ನನಗಿರುವ ಕಲ್ಪನೆಯನ್ನೇ ತಲೆಕೆಳಗೆ ಮಾಡಿ ನಿಜವಾದ ಆಧ್ಯಾತ್ಮದ ಹಾದಿಯಲ್ಲಿ ನಡೆಸುತ್ತಿರುವ ನಿಮಗೆ ಎಷ್ಟು ನಮನ ಸಲ್ಲಿಸಿದರು ಕೂಡ ಸಾಲದು.ಯಾವ ಗುರುವು ಕೂಡ ತನ್ನ ಮೂಲಸಾಧನೆಯಾದ ಮೋಕ್ಷದ ಬಗ್ಗೆ ಸುಲಭವಾಗಿ ಬಿಟ್ಟುಕೊಡುವುದಿಲ್ಲಾ.ಆದರೆ ಇಲ್ಲಿ ಯಾರೇ ಆಗಲಿ ನಿಜವಾದ ಸಾಧನೆ ಹಾಗೂ ಸತ್ಯದ ದಾರಿಯಲ್ಲಿ ನಡೆದದ್ದೇ ಆದರೇ ಮೋಕ್ಷದ ಎಲ್ಲಾ ಸೂತ್ರಗಳನ್ನು ಅವರು ಒಂದು ಚೂರು ಲೋಪವಿಲ್ಲದೇ ಸಾಧಕನಿಗೆ ಸುಲಭವಾಗುವ ರೂಪದಲ್ಲಿ ತಿಳಿಸಿಕೊಡುತ್ತಾರೆ.ಹಾಗೆಯೇ ಇನ್ನೊಂದು ಮುಖ್ಯವಾದ ಅಂಶವೇನೇಂದರೆ ಮನುಷ್ಯ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಹಾಗೂ ಸಂಶೋಧಿಸಬಹುದು ಆದರೆ ಆತ್ಮ ಸಾಕ್ಷಾತ್ಕಾರ ಪಡೆದುಕೊಳ್ಳಲಾಗುವುದಿಲ್ಲಾ.ಅದೊಂದು ತಪಸ್ಸು ಕೂಡ. ಊರಿಗೊಬ್ಬರು ಡಾಕ್ಟರ್,ವಿಜ್ಞಾನಿ ಸಿಗಬಹುದು ಆದರೆ ಆತ್ಮಸಾಕ್ಷಾತ್ಕಾರ ವಾದವರು ಸಿಗುವುದು ಬಹಳ ಅಪರೂಪ.ಅಂತವರ ಒಡನಾಟ ಸಿಗುವುದೇ ಒಂದು ಪುಣ್ಯವಾಗಿರುತ್ತದೆ.ಇಂತಹ ಗುರು ಹಾಗೂ ಅವರ ಪ್ರೀತಿಯ ಸಾಧಕರ ಕುಟುಂಬದಲ್ಲಿ ನನಗೂ ಪಾಲುದಾರನಾಗುವುದಕ್ಕೆ ಕಾರಣಿಕರ್ತರಾಗಿರುವಂತಹ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ.